20 Sept 2017

Kannada kavana(ಕನ್ನಡ ಕವನ) :ನಾನು



ನಾನು:
ನಾನು ನನ್ನದೇನು ಇಲ್ಲ
ದೇಹ ಆತ್ಮ ನನ್ನದಲ್ಲ
ನಾನು ಎನ್ನೋ ಅಹಂಕಾರ
ಯಾಕೆ ನನ್ನ ತೊರೆಯುತ್ತಿಲ್ಲ

ತಂದೆ ತಾಯಿ ಕೊಟ್ಟ ಜನ್ಮ
ಹೆಸರು ಯಾರೋ ಇಟ್ಟರಣ್ಣ
ಕಲಿತ ವಿದ್ಯೆ ಅರಿತ ಕಸುಬು
ಯಾವುದೂ ನನ್ನದಲ್ಲ
ನಾನು ಎನ್ನೋ ಅಹಂಕಾರ
ಯಾಕೆ ನನ್ನ ತೊರೆಯುತ್ತಿಲ್ಲ

ಸತ್ತಮೇಲೆ ದೇಹ ಆತ್ಮ
ಎರಡು ಬೇರೆ ಆಗುವುದಂತೆ
ಎರಡು ದಿನ ದುಃಖ ವಂತೆ
ಮತ್ತೆ ಅವರಿಗವರದೆ ಚಿಂತೆ
ನನ್ನವರು ಯಾರು ಇಲ್ಲ
ನನ್ನದೆಂದು ಏನು ಇಲ್ಲ

ಕತ್ತಲಲ್ಲಿ ನನ್ನ ನೆರಳು
ನನ್ನ ಜೊತೆ ಬರುವುದಿಲ್ಲ
ಸಾವಿನತ್ತ ನನ್ನ ಪಯಣ
ಸಾಗುತ್ತಿದೆ ನಿಲ್ಲದಂತೆ

ಎಲ್ಲ ತಿಳಿದು ತಿಳಿಯದಂತೆ
ಬದುಕಿ ಸಾದಿಸಿದವರಂತೆ
ನಾನು ಎನ್ನೋ ಅಹಂಕಾರ
ಯಾಕೆ ನನ್ನ ತೊರೆಯುತ್ತಿಲ್ಲ

No comments:

Post a Comment