ಬೆಂಗಳೂರು:
ಬೆಂದಕಾಳೂರು ಬೆಂಗಳೂರು ಆಯ್ತು
ಮರಗಳೆಲ್ಲವು ಮರೆಯಾಗಿ ಹೋಯ್ತು
ಪ್ರಗತಿಯ ನೆಪದಲ್ಲಿ ಕೆರೆಗಳೇ ಕಳೆದುಹೋಯ್ತು
ರಸ್ತೆಗಳು ದೊಡ್ದದಾಯ್ತು ಮನಸುಗಳು ಚಿಕ್ಕದಾಯ್ತು
ಪೆನ್ನು ಪುಸ್ತಕಗಳು ಕಾಲೇಜಿಗೆ ಸೀಮಿತ ಆಯ್ತು
ಕಿಟಕಿಯ ಸೀಟು ಸಿಕ್ಕರು
ಚಿಕ್ಕದಾಯ್ತು ನೋಡುವಂತಾಯ್ತು..
ಸುಂದರ ಆಫೀಸು
ಅತಿಸುಂದರ ಮನೆ ಇದ್ದರೂ
ಅರ್ಧ ಜೀವನ ರಸ್ತೆಯಲ್ಲೆ ಕಳೆಯುವಂತಾಯ್ತು...
ಸಿಟಿ ಲೈಫು ಬಿಜಿ ಲೈಫು
ಗೊತ್ತಿದ್ದೂ ಬಿಟ್ಟು ಇರಲಾಗದ ಬಿಸಿ ತುಪ್ಪವಾಯ್ತು
No comments:
Post a Comment