18 Sept 2017

Kannada kavana(ಕನ್ನಡ ಕವನ):G- ವನ

G- ವನ:
ಹಲವು ವಿದ್ಯೆಯ ಕಲಿತೆ
ನನ್ನಲಿರುವುದ ಮರೆತೆ
ಉಧರ ನಿಮಿತ್ತ ಊರೂರು ಅಲೆದೆ
ಅನ್ಯರೊಳಗೊಂದಾಗಿ ನನ್ನತನವನು ಮರೆತೆ
ಅನ್ಯರಲಿ ನನ್ನವರ ಹುಡುಕಾಟದಲಿ
ನನ್ನವರಿಂದ ನಾ ದೂರ ಸರಿದೆ
ಅರ್ಥ ವಾಗದ ಬದುಕಿಗೆ
ಅರ್ಥ ಹುಡುಕಲು ಹೊರಟೆ
ಅರ್ಧ ಜೀವನ ಕಳೆದೆ
ಮುಂದೇನು ಅರಿಯದೆ
ಹಿಂದಿರುಗಲಾಗದೆ
ಚಿಂತೆಯ ಚಿತೆಯಲ್ಲಿ
ಬೆಂದೆ ನಾ ನೊಂದೆ.

No comments:

Post a Comment