ಕನಸು:
ಕನಸಿಗೆ ರೆಕ್ಕೆ ಕಟ್ಟಿ
ಹಾರಿದೆ ಮನದ ಹಕ್ಕಿ
ನಿಲುಕದ ಬಾನಿನಲ್ಲಿ
ಸಾಗಿದೆ ಭಯವ ಮೆಟ್ಟಿ
ಮುಗಿಲಿನ ಒಡಲ ಛೀರಿ
ಲೋಕದ ಮಿತಿಯ ಮೀರಿ
ಕಲ್ಪನೆಯ ರಥವನೇರಿ
ಕನಸಿಗೆ ರೆಕ್ಕೆ ಕಟ್ಟಿ
ಹಾರಿದೆ ಮನದ ಹಕ್ಕಿ
ನೈಜತೆಯ ದೂರ ಒತ್ತಿ
ಕಲ್ಪನೆಯ ಮೋಡ ಹತ್ತಿ
ಯೆಲ್ಲ ಎಲ್ಲೆಯ ಮೀರಿ
ಹಾರಿದೆ ರೆಕ್ಕೆ ಬಿಚ್ಚಿ
ಚಿಂತೆಯ ನೆರಳ ಮೆಟ್ಟಿ
ಗೆಲುವಿನ ಏಣಿ ಹತ್ತಿ
ಕನಸಿಗೆ ರೆಕ್ಕೆ ಕಟ್ಟಿ
ಹಾರಿದೆ ಮನದ ಹಕ್ಕಿ
ಲೋಕದ ಮಿತಿಯ ಮೀರಿ
ಕಲ್ಪನೆಯ ರಥವನೇರಿ
ಕನಸಿಗೆ ರೆಕ್ಕೆ ಕಟ್ಟಿ
ಹಾರಿದೆ ಮನದ ಹಕ್ಕಿ
ನೈಜತೆಯ ದೂರ ಒತ್ತಿ
ಕಲ್ಪನೆಯ ಮೋಡ ಹತ್ತಿ
ಯೆಲ್ಲ ಎಲ್ಲೆಯ ಮೀರಿ
ಹಾರಿದೆ ರೆಕ್ಕೆ ಬಿಚ್ಚಿ
ಚಿಂತೆಯ ನೆರಳ ಮೆಟ್ಟಿ
ಗೆಲುವಿನ ಏಣಿ ಹತ್ತಿ
ಕನಸಿಗೆ ರೆಕ್ಕೆ ಕಟ್ಟಿ
ಹಾರಿದೆ ಮನದ ಹಕ್ಕಿ
No comments:
Post a Comment