***ಕೊರೊನಾ***
ಅಂದಿನಿಂದ ಇಂದಿನ ತನಕ
ಬಂದ ವೈರಸ್ಸುಗಳೆಲ್ಲ
ಸಿಕ್ಕಿದ್ದೆಲ್ಲ ತಿಂದ
ದೇಶದಿಂದ..
ಅಂದು ಬಂದದ್ದು
ಸೊಳ್ಳೆಯಿಂದ,
ನೀರಿನಿಂದ,
ಹಂದಿ,ಇಲಿ, ಬಾವಳಿಗಳಿಂದ..
ಇಂದು ಬಂತು ಸ್ಪರ್ಶದಿಂದ...
ಮುಂದೊಂದು ದಿನ
ಬರಬಹುದು ಗಾಳಿಯಿಂದ...
ಸಮಯದ ಅಭಾವದಿಂದ
ಅರ್ಧ ಬೇಯಿಸಿ ತಿಂದ..
ಕಯ್ ಬಾಯಿ ವರೆಸಿ ಕಾಗದದಿಂದ...
ಹೀಗೆ ಹರಡಿದ ವೈರಸ್ಸಿನಿಂದ
ತಾನು ನೊಂದ..ಹಲವರನ್ನು ಕೊಂದ...
ತಿದ್ದಿಕೊಳ್ಳದಿದ್ದರೆ ಬುದ್ಧಿವಂತಿಕೆಯಿಂದ
ತಿಳಿಯುವುದು ಒಂದುದಿನ ಸರ್ವನಾಶದಿಂದ..
ದುಡಿದು, ಕೊಂದು, ತಿನ್ನುವುದಷ್ಟೇ ಅಲ್ಲ
ತೊಳೆದುಕೊಳ್ಳುವುದು ಮುಖ್ಯ
ಎನ್ನುವ ಸತ್ಯ ಅರಿತರೆ ಚಂದ.
No comments:
Post a Comment