30 Jan 2018

Kannada kavana(ಕನ್ನಡ ಕವನ) :ಏನ್ಮಾಡಲಿ

ಏನ್ಮಾಡಲಿ

ನಿನ್ನೆಯ ನೆನಪಲ್ಲಿ
ನಾಳೆಯ ಕನಸಲ್ಲಿ
ಇಂದು ಕಳೆದು ಹೋಯಿತಲ್ಲ ಏನ್ಮಾಡಲಿ

ಬಾಲ್ಯದ ನೆನಪಲ್ಲಿ
ಮುಪ್ಪಿನ ಭಯದಲ್ಲಿ
ಯವ್ವನ ಮುಗಿದ್ಹೋಯ್ತಲ್ಲ ಏನ್ಮಾಡಲಿ

ಬೆಳೆಯುವ ತುಡಿತದಲಿ
ದುಡಿಯುವ ಹುರೂಪಿನಲಿ
ಬದುಕುವುದೇ ಮರೆತೋಯಿತು ಏನ್ಮಾಡಲಿ

ಕಲಿತ ವಿದ್ಯೆಯಿಂದ ಕೆಲಸಕ್ಕೆ ಒಳಿತಾಯಿತು
ದುಡಿದ ಹಣವೆಲ್ಲ ವೈದ್ಯರ ಬಳಿ ಹೋಯಿತು
ನನ್ನದೇನು ಇಲ್ಲ ಏನ್ಮಾಡಲಿ

No comments:

Post a Comment